ಜರ್ಮನಿಯ ಭೌತವಿಜ್ಞಾನಿಯಾಗಿದ್ದ ಅಟ್ಟೊ ರಿಚರ್ಡ್ ಲುಮ್ಮರ್‌ರವರು ೧೮೬೦ರ ಜುಲೈ ೧೭ರಂದು ಸೆಕ್ಸೋನಿಯ ಜೆನಾದಲ್ಲಿ ಜನಿಸಿದರು. ಮೈಕಾ ಹಾಳೆಗಳಲ್ಲಿ ಆಂತರಿಕ ಪ್ರತಿಫಲನ ಕ್ರಿಯೆಯಿಂದ ( ) ಉತ್ಪತ್ತಿಯಾದ ವ್ಯತಿಕರಣ ಅಂಚುಗಳ ( ) ಮೇಲೆ ಲುಮ್ಮರ್‌ರವರು ತಮ್ಮ ಸಂಶೋಧನೆಯನ್ನು ನಡೆಸಿದರು. ಆ ಸಂಶೋಧನೆಯ ಉತ್ತೇಜನದಿಂದ ಅವರು ಉಚ್ಚ-ಪೃಥಕ್ಕರಣದ ರೋಹಿತದರ್ಶಕವನ್ನು (- ) ನಿರ್ಮಿಸಿದರು. ನಂತರ ಅರ್ನ್‌ಸ್ಟ್ ಗೆಹ್ರ್‌ಕೆಯವರು (೧೮೭೮-೧೯೬೦) ಆ ರೋಹಿತದರ್ಶಕದಲ್ಲಿ ಅಶ್ರಗವನ್ನು () ಅಳವಡಿಸಿದರು. ಹಾಗೆ ತಯಾರಾದ ‘ಲುಮ್ಮರ್-ಗೆಹ್ರ್‌ಕೆ ವ್ಯತಿಕರಣ ರೋಹಿತದರ್ಶಕ’ ಹಿಂದೆ ಚಾರ್ಲ್ಸ್ ಫಾಬ್ರೆ (೧೮೬೭-೧೯೪೫) ಮತ್ತು ಆಲ್ಫ್ರೆಡ್ ಪೆರೋಟ್ (೧೮೬೩-೧೯೨೫) ನಿರ್ಮಿಸಿದ್ದ ವ್ಯತಿಕರಣಮಾಪಕವನ್ನು () ಹಿಂದಕ್ಕೆ ಹಾಕಿತು. ಕಾಂತಿಮಾನದ () ಮೇಲೆ ಅಂತರರಾಷ್ಟ್ರೀಯ ಏಕಮಾನವನ್ನು ನಿರ್ಧರಿಸುವ ಕೆಲಸವನ್ನು ಅವರು ಮಾಡಿದರು. ಅದಕ್ಕಾಗಿ ಲುಮ್ಮರ್‌ರವರು ಇನ್ನೊಬ್ಬ ಜರ್ಮನಿಯ ವಿಜ್ಞಾನಿ ಯೂಜಿನ್ ಬ್ರೋಧನ್‌ರವರ (೧೮೬೦-೧೯೩೮) ಜೊತೆ ಸೇರಿಕೊಂಡು ‘ಲುಮ್ಮರ್-ಬ್ರೋಧನ್ ಕೊಳವೆ’ ಎಂಬುದಾಗಿ ಪ್ರಸಿದ್ಧಿಯಾದ ದ್ಯುತಿಮಾಪಕವನ್ನು () ವಿನ್ಯಾಸಿಸಿದರು. ಆ ಉಪಕರಣ ರಾಬರ್ಟ್ ಬುನ್ಸೆನ್ (೧೮೧೧-೧೮೯೯) ೧೮೪೪ರಲ್ಲಿ ಕಂಡುಹಿಡಿದಿದ್ದ ‘ಗ್ರೀಸ್-ಸ್ಪಾಟ್ ದ್ಯುತಿಮಾಪಕ’ದ ಪರಿಷ್ಕೃತ ಮಾದರಿಯಾಗಿತ್ತು. ನಂತರ ಲುಮ್ಮರ್‌ರವರು ವಿಜ್ಞಾನಿ ವಿಲ್‌ಹೆಲ್ಮ್ ವೀನ್‌ರವರ (೧೮೬೪-೧೯೨೮) ಜೊತೆ ಸೇರಿ ‘ಕಪ್ಪು-ಕಾಯದ ವಿಕಿರಣಕಾರಿ’ (- ) ಗೋಳವನ್ನು ಕಂಡುಹಿಡಿದರು. ಆ ವಿಕಿರಣಕಾರಿಯನ್ನು ಒಂದು ನಿಗದಿತ ಉಷ್ಣಕ್ಕೆ ಕಾಯಿಸಿದಾಗ, ಅದು ಪರಿಪೂರ್ಣ ಕಪ್ಪು-ಕಾಯದ ( -) ರೀತಿ ವರ್ತಿಸುತ್ತದೆ. ನಂತರ ಲುಮ್ಮರ್‌ರವರು ‘ಪಾದರಸ ಬಾಷ್ಟದ ದೀಪ’ವನ್ನು ( ) ನಿರ್ಮಿಸಿದರು. ಅಲ್ಲದೆ ಅವರು ಸೂರ್ಯನ ಉಷ್ಣತೆಯ ಅಂದಾಜನ್ನು ತಯಾರಿಸಿದರು. ಲುಮ್ಮರ್‌ರವರು ೧೯೨೫ರ ಜುಲೈ ೫ರಂದು ಬ್ರೆಸ್ಲಾದಲ್ಲಿ (ಈಗ ಪೋಲೆಂಡಿನಲ್ಲಿರುವ ವ್ರೊಕ್ಲಾದಲ್ಲಿ) ನಿಧನರಾದರು. == ಉಲ್ಲೇಖಗಳು ==